ಸಾಮೂಹಿಕ ನೀರಾವರಿ/ಏತ ನೀರಾವರಿ ಯೋಜನೆ:

ನದಿ ಮತ್ತು ನೈಸರ್ಗಿಕ ಹಳ್ಳಗಳ ಅಕ್ಕಪಕ್ಕದಲ್ಲಿರುವ ಪರಿಶಿಷ್ಟ ಜಾತಿಗೆ ಸೇರಿದ ಸಣ್ಣ ಮತ್ತು ಅತಿಸಣ್ಣ ರೈತರ ಜಮೀನುಗಳನ್ನು ಗುರುತಿಸಿ 8 ರಿಂದ 15 ಎಕರೆ ಹೊಂದಿರುವ ಗುಂಪು ಜಮೀನಿಗೆ ನಿಗದಿಪಡಿಸಿದ ಘಟಕ ವೆಚ್ಚದಲ್ಲಿ ಪುರ್ಣ ಸಹಾಯಧನದೊಂದಿಗೆ ಏತ ನೀರಾವರಿ ಯೋಜನೆಯನ್ನು ಕೈಗೊಳ್ಳಲಾಗುವುದು. 8 ಎಕರೆ ಘಟಕಕ್ಕೆ ರೂ.2.53ಲಕ್ಷ ಹಾಗೂ 15 ಎಕರೆ ಘಟಕಕ್ಕೆ ರೂ.3.59ಲಕ್ಷ ಘಟಕ ವೆಚ್ಚ ನಿಗದಿಪಡಿಸಲಾಗಿದೆ.

ವೈಯಕ್ತಿಕ ನೀರಾವರಿ ಕೊಳವೆಬಾವಿ ಯೋಜನೆ:

ಈ ಯೋಜನೆಯಡಿ ಸಣ್ಣ ಮತ್ತು ಅತಿಸಣ್ಣ ರೈತರ ಜಮೀನಿನಲ್ಲಿ ಕೊಳವೆಬಾವಿ ಕೊರೆಯಿಸಿ ಪಂಪ್ ಮೋಟಾರನ್ನು ಅಳವಡಿಸಲಾಗುವುದು. ಘಟಕ ವೆಚ್ಚವು ರೂ.2,00,000/- ಆಗಿದ್ದು ರೂ.1,50,000/- ಸಹಾಯಧನವಾಗಿದ್ದು, ಉಳಿದ ಮೊತ್ತ ರೂ.50,000/- ಅವಧಿಸಾಲ ಇರುತ್ತದೆ. ಸಹಾಯಧನವನ್ನು ಆಯವ್ಯಯ/ಎಸ್ಸಿಎಸ್ಪಿ ಕ್ರೋಡೀಕೃತ ಹಣದಿಂದ ಒದಗಿಸಲಾಗುವುದು.

ಅವಧಿಸಾಲವನ್ನು ಎನ್.ಎಸ್.ಸಿ.ಎಫ್.ಡಿ.ಸಿ.ಯಿಂದ ಭರಿಸಲಾಗುವುದು. ಕೊಳವೆಬಾವಿಗಳ ವಿದ್ಯುದ್ದೀಕರಣಕ್ಕಾಗಿ ಎಸ್ಸಿಎಸ್ಪಿ ಕ್ರೋಡೀಕೃತ ಹಣವನ್ನು ಎಸ್ಕಾಂಗಳಿಗೆ ನೀಡಲಾಗುವುದು.